- Home
- Organization
- History
- Birthplace
- Compositions
- Photo Gallery
- News/Events
- Journals
- Seva/Donations
- Books Published
- E-Library
- Related Links
- PVD Radio/Video
- Contact us
- Blog
- Sri Prasanna Venkata Dasara Aradhane 2019
- Kannada Language
- Live Dasavani Karyakrama
- Blog
- Smaraka Bhavan Construction Progress
- Dasara Smaraka Bhavana Appeal
- ಶ್ರೀ ಪ್ರಸನ್ನವೆಂಕಟ ದಾಸರ ಸೇವೆಗೆ ಭೂದಾನ ಮಾಡಲ
- Aradhane-2023
ಶ್ರೀ ಪ್ರಸನ್ನವೆಂಕಟ ದಾಸರ ಆರಾಧನಾ ಮಹೋತ್ಸವ 2019
ಗಣ್ಯರಿಂದ ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಹಾಗು ಸಿಡಿ ಮತ್ತು ೫ ಪುಸ್ತಕಗಳ ಬಿಡುಗಡೆ ಸಮಾರಂಭ
ಡಾ. ಸುಭಾಸ ಕಾಖಂಡಕಿರವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿ ಇಲ್ಲಿಯವರೆಗೂ ಪ್ರಸನ್ನವೆಂಕಟ ಟ್ರಸ್ಟ್ ಸಂಸ್ಥೆ ನಡೆಸಿದ ಸಂಶೋಧನೆ ಮತ್ತು 25 ಕ್ಕೂ ಹೆಚ್ಚು ಪ್ರಸನ್ನವೆಂಕಟ ದಾಸರ ಸಾಹಿತ್ಯಕ್ಕೆ ಸಂಬಂಧಿಸಿದ ಗ್ರಂಥ ಗಳನ್ನು ಪ್ರಕಟಿಸಿದ ವಿವರಗಳನ್ನು ನೀಡಿ, ಮರಾಠಿ - ಹಿಂದಿ ಇಂಗ್ಲಿಷ್ ಭಾಷೆ ಗಳಲ್ಲಿ ಕೆಲವು ಕೃತಿಗಳು ಭಾವಾನುವಾದವಾಗಿ ಪ್ರಕಟವಾಗಿವೆ ಎಂದುನ್ನು ತಿಳಿಸಿ, ೨೦೦೩ ರಲ್ಲಿ ಲಭ್ಯವಿದ್ದ 450 ಕೃತಿಗಳು ಇಂದು ಹೊಸ ಶೊಧನೆಯಿಂದ 685 ಕೃತಿಗಳಾಗಿವೆ ಎನ್ನುತ್ತಾ ಈ ಎಲ್ಲ ಶೊಧನೆಗೆಳು ಹಲವಾರು ಸಂಶೊಧಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದಾಗಿವೆ ಎಂದು ಸ್ಮರಿಸಿ, ಮುಂದೆ ಆಗಬೇಕಾದ ಕಾರ್ಯಗಳನ್ನು ವಿವರಿಸಿದರು. ಕೃತಿಗಳ ಬಿಡುಗಡೆ ನಂತರ ಪೂರ್ಣಪ್ರಜ್ಞಾ ಸಂಶೊಧನಾ ಮಂದಿರ ವಿದ್ಯಾಪೀಠ ಬೆಂಗಳೂರು ಇದರ ನಿರ್ದೇಶಕರಾದ ಡಾ.ಆನಂದತೀರ್ಥಾಚಾರ್ಯ ರಿಂದ ಸಂಶೊಧನಾ ಗ್ರಂಥದ ಬಗ್ಗೆ ನಾಲ್ಕು ಮಾತುಗಳ್ಳನ್ನಾಡಿದರು
"ಬಾರೋ ವೆಂಕಟರಮಣ "ಸಿಡಿ ಲೋಕಾರ್ಪಣೆ ಡಾ. ವೀರಣ್ಣ ಚಿರಂತಿಮಠ ಮಾನ್ಯ ವಿಧಾನಸಭಾ ಸದಸ್ಯರು ಬಾಗಲಕೊಟೆ ಅವರಿಂದ ಲೋಕಾರ್ಪಣೆ."ಬಾರೊ ವೆಂಕಟರಮಣ" ಸಿಡಿ ಬಿಡುಗಡೆ ನಂತರ ಡಾ. ಚಿರಂತಿಮಠ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬಾಗಲಕೊಟೆಯಲ್ಲಿ ದಾಸರ ಸ್ಮಾರಕ ಭವನ ನಿರ್ಮಾಣಕ್ಕೆ ಎಲ್ಲ ಸಹಾಯ ಮಾಡುವುದಾಗಿ ತಿಳಿಸಿದರು.
ದಾಸ ಸಾಹಿತ್ಯದ ಅಪ್ರಕಟಿತ ಹಸ್ತ ಪ್ರತಿಗಳ ಸಂಶೋಧಕರಾದ ಶ್ರೀ ಲಕ್ಷ್ಮೀ ಕಾಂತ ಪಾಟೀಲ ಅವರಿಗೆ "ಶ್ರೀ ಪ್ರಸನ್ನವೆಂಕಟ ಹರಿದಾಸ ಸಾಹಿತ್ಯ ಸಂಶೋಧನಾ ರತ್ನ" ಪ್ರಶಸ್ತಿ ಪ್ರದಾನ.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಕೆ. ಗೋಕುಲನಾಥ ಹಾಗು ಅವರ ಶ್ರೀಮತಿ ಅವರಿಗೆ ಸನ್ಮಾನ.
ಮೊದಲನೇಯ ಗೋಷ್ಟಿಯಲ್ಲಿ ಡಾ. ಕೆ. ಗೊಕುಲನಾಥ ಅವರು "ದಾಸಮಣಿ" ಶ್ರೀ ಪ್ರಸನ್ನವೆಂಕಟ ದಾಸರ ಕೀರ್ತನೆಗಳಲ್ಲಿ ಭಕ್ತಿ" ಎಂಬ ಪ್ರಭಂಧವನ್ನು ಮಂಡಿಸುತ್ತ ದಾಸರ ಭಕ್ತಿಯ ವೈಶಿಷ್ಟ್ಯತೆ ಯನ್ನು ದಾಸರ ಕೃತಿಗಳ ಮುಖಾಂತರ ಶೋಧಿಸಿ ಎಳೆ - ಎಳೆಯಾಗಿ ತೆರೆದಿಟ್ಟರು.
ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಮೊದಲನ ಯ ಗೋಷ್ಟಿಯ ಅಧ್ಯಕ್ಷತೆ ವಹಿಸಿ ತಮ್ಮ ಅನಿಸಿಕೆ ಗಳನ್ನು ಹಂಚಿ ಕೊಂಡರು.
ಎರಡನೇಯ ಗೋಷ್ಟಿಯಲ್ಲಿ ವಿದ್ವಾನ್. ವಾದಿರಾಜಾಚಾರ್ಯ ಅಗ್ನಿಹೋತ್ರಿ ಅವರು " ಪ್ರಸನ್ನವೆಂಕಟರ ಸಂಸ್ಕೃತ ಕೃತಿಗಳು - ಒಂದು ಅಧ್ಯಯನ" ಎಂಬ ತಮ್ಮ ಪ್ರಭಂಧವನ್ನು ಮಂಡಿಸಿ ದಾಸರ ೨೦ಕ್ಕೂ ಹೆಚ್ಚು ಸಂಸ್ಕೃತ ಹಾಗೂ ಸಂಸ್ಕೃತದ ಭೂಯಿಷ್ಟ ಕೃತಿಗಳನ್ನು ಶೋಧಿಸಿ ಅವುಗಳ ಹಿನ್ನೆಲೆ ಹಾಗೂ ವೈಶಿಷ್ಟ್ಯತೆಯನ್ನು ಗುರುತಿಸಿ ಆಳವಾದ ಅಧ್ಯಯನದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸುವ ತಮ್ಮ ಪ್ರಬಂಧವನ್ನು ಮಂಡಿಸಿದರು. ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಅಧ್ಯಕ್ಷತೆವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮೂರನೆಯ ಗೋಷ್ಟಿಯಲ್ಲಿ. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು"ಶ್ರೀ ಪ್ರಸನ್ನವೆಂಕಟ ದಾಸರ ಕೃತಿಗಳಲ್ಲಿ ಭಾಷಾ ಸೌಂದರ್ಯ" ಎಂಬ ವಿಶೇಷವಾದ ಪ್ರಬಂಧವನ್ನು ಮಂಡಿಸಿ ದಾಸರ ಶೈಲಿ- ಪದ-ಪದ್ಯಗಳ ಪ್ರಯೋಗ, ದಾಸರ ಕೃತಿಗಳಲ್ಲಿಯ ಭಾವ ಸೌಂದರ್ಯ ಮುಂತಾದವುಗಳನ್ನು ಅವರ ಕೃತಿಗಳಲ್ಲಿ ಗುರುತಿಸಿ ಉದಾಹರಣೆಯೊಂದಿಗೆ ವಿಶ್ಲೇಷಣೆ ಮಾಡಿದರು. ಈ ಗೋಷ್ಟಿಯ ಅಧ್ಯಕ್ಷ ತೆಯನ್ನು ಡಾ. ಗೋಕುಲನಾಥರವರುವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
ನಾಲ್ಕನೇ ಯ ಗೋಷ್ಟಿಯಲ್ಲಿ ಡಾ. ಧೋಳಖೇಡ ನಾರಾಯಣಾಚಾರ್ಯ ಅವರು "ಶ್ರೀ ಪ್ರಸನ್ನವೆಂಕಟ ದಾಸರು ರಚಿಸಿದ ತತ್ವ ವಿವೇಚನೆ ಕೃತಿಗಳ ಒಳನೊಟ" ಎಂಬ ವಿದ್ವತ್ ಪೊರ್ವಕವಾದ ಪ್ರಬಂಧ ಮಂಡಿಸಿದರು. ಡಾ. ರಘೋತ್ತಮಾಚಾರ್ಯ ನಾಗಸಂಪಿಗೆ ಅವರು ಅಧ್ಯಕ್ಷತೆವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಐದನೇಯ ಗೋಷ್ಟಿಯಲ್ಲಿ ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಅವರು "ಪ್ರಸನ್ನವೆಂಕಟದಾಸರು ರಚಿಸಿದ ಸೃಷ್ಟಿ ಪ್ರಕರಣದ ಆಯ್ದ ನುಡಿಗಳ ಒಳನೋಟ ಎಂಬ ಪ್ರಬಂಧ ಮಂಡಿಸಿ ನುಡಿಗಳಲ್ಲಿ ಅಡಗಿದೆ ಗಾಡವಾದ ಆಧ್ಯಾತ್ಮಿಕ ವಿಷಯ ಗಳನ್ನು ಶೋಧಿಸಿ ಆಧಾರ ಸಮೇತವಾಗಿ ವಿಶ್ಲೇಷಣೆ ಮಾಡಿದರು. ಈ ಗೋಷ್ಟಿಯ ಅಧ್ಯಕ್ಷ ತೆಯನ್ನು ವಹಿಸಿದ ಪಂ. ಭೀಮಸೇನಾಚಾರ್ಯ ಪಾಂಡುರಂಗ ಅವರು ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು.
ಆರನೇಯ ಗೋಷ್ಟಿಯಲ್ಲಿ ಶ್ರೀ ಲಕ್ಷ್ಮಿಕಾಂತ್ ಪಾಟೀಲ್ ಅವರು " ಪ್ರಸನ್ನವೆಂಕಟ ದಾಸರ ಕೃತಿಗಳಲ್ಲಿ ಭಕ್ತಿ ನೇಯ್ಗೆ" ಎಂಬ ತಮ್ಮ ಪ್ರಭಂಧವನ್ನು ಮಂಡಿಸಿ ದಾಸರ ಭಕ್ತಿಯ ವೈಶಿಷ್ಟ್ಯತೆ ಯನ್ನು ತಾವೂ ಶೋಧಿಸಿದ ಹಲವಾರು ಅಪ್ರಕಟಿತ ಕೀರ್ತನೆಗಳನ್ನು ಉಲ್ಲೇಕಿಸಿ ಅವುಗಳ ವೈಶಿಷ್ಟತೆಯನ್ನು ಪ್ರತಿಪಾದಿಸಿದರು
ಈ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಪಂ. ಶ್ರೀನಿವಾಸಚಾರ್ಯ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
ಈ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಪಂ. ಶ್ರೀನಿವಾಸಚಾರ್ಯ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
ಡಾ. ರಾಯಚೂರು ಶೇಷಗಿರಿದಾಸ ಅವರಿಗೆ "ಪ್ರಸನ್ನವೆಂಕಟ ಸಂಗೀತರತ್ನ" ಪ್ರಶಸ್ತಿ ಪ್ರದಾನ.
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಚಿಂತನ - ಮಂಥನ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷರ ಭಾಷಣ.
ಡಾ. ಸುಭಾಸ ಕಾಖಂಡಕಿ ಅವರ ವಂದನಾರ್ಪಣೆಯೊಂದಿಗೆ ಸಮ್ಮೇಳನದ ಕಾರ್ಯಕ್ರಮ ಮುಕ್ತಾಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಯಂಕಾಲ ೬ ಗಂಟೆಯಿಂದ ಪ್ರಾರಂಭವಾಗಿ ಬೆಳಗಿನ ಜಾವ ೫ಗಂಟೆಗೆ ಹರಿವಾಣ ಸೇವೆಯಲ್ಲಿ ಮುಕ್ತಾಯ ವಾಯಿತು.
ಡಾ. ಸುಭಾಸ ಕಾಖಂಡಕಿ ಅವರ ವಂದನಾರ್ಪಣೆಯೊಂದಿಗೆ ಸಮ್ಮೇಳನದ ಕಾರ್ಯಕ್ರಮ ಮುಕ್ತಾಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಯಂಕಾಲ ೬ ಗಂಟೆಯಿಂದ ಪ್ರಾರಂಭವಾಗಿ ಬೆಳಗಿನ ಜಾವ ೫ಗಂಟೆಗೆ ಹರಿವಾಣ ಸೇವೆಯಲ್ಲಿ ಮುಕ್ತಾಯ ವಾಯಿತು.
ಡಾ. ರಾಯಚೂರು ಶೇಷಗಿರಿದಾಸ ಅವರಿಂದ ಹರಿದಾಸವಾಣಿ
ಪಂ. ಅನಂತ ಕುಲಕರ್ಣಿ ಅವರ ಗಾಯನದಿಂದ ಹರಿವಾಣ ಸೇವೆ.
ದ್ವಾದಶಿ-ಆರಾಧನೆ
ದಾಸರು ಅರ್ಚಿಸಿದ ವಿಗ್ರಹ, ತಂಬೂರಿ, ಹಾಗು ಗೊಪಾಳ ಬುಟ್ಟಿಗಳಿಗೆ ಅಲಂಕಾರ.
ದ್ವಾದಶಿ ಪಾರಣಿ- ತೀರ್ಥಪ್ರಸಾದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಾಸರ ಭಕ್ತರಿಗೆ ಅನ್ನಸಂತರ್ಪಣೆ ಬಹಳ ಅಚ್ಚುಕಟ್ಟಾಗಿ ದಾಸರ ಆರಾಧನಾ ಸೇವಾ ಸಮಿತಿಯಿಂದ ಮಾಡಲಾಯಿತು.ಸಾಯಂಕಾಲ ವಿದ್ವಾಸರಿಂದ ಪ್ರವಚನ ದಾಸವಾಣಿ ಸಂಗೀತ ಕಾರ್ಯಕ್ರಮಗಳು ನಡೆದು ಆರಾಧನೆ ಸಮಾರೋಪ ಸಮಾರಂಭದೊಂದಿಗೆ ಸಂಪನ್ನವಾಯಿತು.
ದಾಸರು ಅರ್ಚಿಸಿದ ವಿಗ್ರಹ, ತಂಬೂರಿ, ಹಾಗು ಗೊಪಾಳ ಬುಟ್ಟಿಗಳಿಗೆ ಅಲಂಕಾರ.
ದ್ವಾದಶಿ ಪಾರಣಿ- ತೀರ್ಥಪ್ರಸಾದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಾಸರ ಭಕ್ತರಿಗೆ ಅನ್ನಸಂತರ್ಪಣೆ ಬಹಳ ಅಚ್ಚುಕಟ್ಟಾಗಿ ದಾಸರ ಆರಾಧನಾ ಸೇವಾ ಸಮಿತಿಯಿಂದ ಮಾಡಲಾಯಿತು.ಸಾಯಂಕಾಲ ವಿದ್ವಾಸರಿಂದ ಪ್ರವಚನ ದಾಸವಾಣಿ ಸಂಗೀತ ಕಾರ್ಯಕ್ರಮಗಳು ನಡೆದು ಆರಾಧನೆ ಸಮಾರೋಪ ಸಮಾರಂಭದೊಂದಿಗೆ ಸಂಪನ್ನವಾಯಿತು.